ಕಣ್ಣ ಭಾವಗೀತೆ

ಎದೆಯ ಭಾವಗೀತೆಯ
ಕಣ್ಣೆ ಇಂದು ಹಾಡಿದೆ
ಮನವು ಬರೆದ ಪದವನೆಲ್ಲ
ತುಟಿಯು ಹೇಳಲಾರದೆ

ಮೌನದಲ್ಲು ಕೂಡ ನಯನ
ನೂರು ಮಾತು ಹೇಳಿದೆ
ಮೆಲ್ಲ ಬಿರಿದ ಕೆಂದುಟಿಯು
ನಲ್ಲನೆದೆಯ ಕೆಣಕಿದೆ

ಎದೆಯ ತಂಪು ಮಾಡುತಿದೆ
ಹಾಡದಿರುವ ಹೃದಯ ರಾಗ
ಎದೆಯ ಬಡಿತವೆಲ್ಲ ಇಂದು
ಪಡೆಯಿತೀಗ ಹೊಸತು ವೇಗ

ಸಿಹಿಯ ನುಡಿಯನೆಲ್ಲ ಕೇಳೆ
ಕಾತರಿಸಿದೆ  ಮನ
ಬೇಡವಾದ ಮೌನ ಕಳೆಯೆ
ತವಕ ನನ್ನಲೀ ದಿನ

No comments:

Post a Comment