ಕಾಗೆ

ಗಗನದಲಿ ತೇಲುತಿದೆ ಕಾಗೆ
ಕಾರ್ಮೋಡದ ಹಾಗೆ
ಸತ್ತ ಸಮಾಧಿಯ ಮೇಲೆ ಬರದಿರೆ
ಸಿಗಲಿಲ್ಲ ಆತ್ಮಶಾಂತಿ ಎನುವರು
ಪಿಂಡ ಹಿಡಿದು ನಿನ್ನನರಸಿ
ಕಾ ಕಾ, ಎನುವಾಗ,
ನೀ ಪಿತನಾಗ
ಮೈ ಸೋಕಿದರೂ ಸಾಕು,
ಸ್ನಾನ ಮಾಡಬೇಕು
ಕುಟುಕಿದರಂತೂ ಗ್ರಹಗತಿಗೆ
ಶಾಂತಿ ಮಾಡಲೇಬೇಕು
ಗೂಡ ಕಳಚಿ ಬಿದ್ದರೆ ಜನರು ದೂರ ಸರಿವರು
ಸತ್ತು ಮಲಗಿದ ಅದಕೆ ದಿಕ್ಕು ದೆಸೆಯಾರಿಲ್ಲ
ದೇವ ಪಕ್ಷಿ ಇದುವೆ ಪೂಜೆ ಆರತಿ ಇಲ್ಲ
ಎಂತಹ ವಿಷಾದ ವಿಪರ್ಯಾಸ, ವಿನೋದ

No comments:

Post a Comment