ಜೀವದಣತೆ ಹಚ್ಚುವಾಸೆ

ಮರಣ ಶಯ್ಯೆಯೊಳಿರಲು
ಮರಳಿ ಬದುಕುವಾಸೆ
ದಿಕ್ಕೆಟ್ಟು ಅಲೆಯುತಿಹ
ಅಲೆಗಳಿಗೆ ನೆಲೆ ನಿಲ್ಲುವಾಸೆ
ಮಿಂಚೊಡನೆ ಮುಗುಳ್ನಗುವ
ಮುಗಿಲ್ದನಿಗದುವೆ ಸಿಡಿಲಾಗುವಾಸೆ
ಕಡಲ ಸೇರಿದ ನದಿಗೆ
ಜಿಗಿದು ಮೋಡ ಕೂಡುವಾಸೆ
ಬೆಂದ ಕಾವ್ಯದ ನೊಂದ ಕವನಕೆ
ಗೀತ ರೂಪಕವಾಗುವಾಸೆ
ಎಲ್ಲ ಮುಗಿದ ಬಾಳಿಗಿಂದು
ಜೀವದಣತೆ ಹಚ್ಚುವಾಸೆ

No comments:

Post a Comment