ಸೋಜಿಗದ ಜಗ

ಹಸುವೊಳಗಿನ ಹಾಲು
ಹಾಲಿನೊಳಗಣ ಕೆನೆಮೊಸರು
ಮೊಸರೊಳಗಿನ ಬೆಣ್ಣೆ
ಬೆಣ್ಣೆಯೊಳಗಿನ ತುಪ್ಪ
ಒಂದ ಸೀಳಿ ಒಂದು
ಬರುವುದು ಸತ್ಯ

ಬಳ್ಳಿಯೊಳಗಿನ ಹೂವು
ಹೂವಿನೊಳಗಣ ಮಧುವು
ಮಧುವ ಹೀರಿದ ಜೇನು
ಜೇನಗೂಡಿನ ಮೇಣ
ಜಗದ ಹಿರಿಮೆಯು ನಮಗೆ
ಕಾಣುವುದು ನಿತ್ಯ

ಬೀಜದೊಳಗಿನ ಮರವು
ತತ್ತಿಯೊಳಗಿನ ಹಕ್ಕಿ
ಬಾನಿನೊಳಗಣ ಮಳೆಯು
ಅನ್ನ ನೀಡುವ ಇಳೆಯು
ಎಂಥ ಸೋಜಿಗ ಜಗದಿ
ಮಾಯ ಮಂತ್ರದ ತೆರದಿ

ಬಿಡಿಸಲಾಗದ ಗಂಟು
ತೊರೆಯಲಾಗದ ನಂಟು 
ನೋಡಿ ತಿಳಿಯೆಲೋ ಮನುಜ
ಸಹಜವಲ್ಲದ ನಿಜವ

No comments:

Post a Comment