ಕರ್ನಾಟಕ
ಮಾತೆಯೇ ನಮ್ಮೆಲ್ಲರ ದೈವ
ಸಿರಿಗನ್ನಡ
ಸವಿನುಡಿಯೆ ನಮ್ಮೆಲ್ಲರ ಜೀವ ||
ಅಭಿಮಾನದ
ನೆಲೆ ನಮ್ಮದು ಕಲಿವೀರರ ಬೀಡು
ಮಾಧುರ್ಯವೆ
ಮೈದುಂಬಿದ ಕವಿಸಂತರ ಹಾಡು
ಗಿರಿವನಝರಿ
ಜಲಪಾತದ ಶಿಲ್ಪಕಲೆಯ ನಾಡು
||ಕರ್ನಾಟಕ||
ಒಂದಾಗುತ
ಕನ್ನಡದಾ ಕೈಗಳು ನೂರಾರು
ನಾವೆಳೆಯುವ
ಆ ತಾಯಿಯ ಕೂರಿಸಿ ಹೊಂದೇರು
ಎದೆಗೂಡಿನ
ಗುಡಿಗುಡಿಯಲು ದೀಪವ ನಾವ್ ಉರಿಸಿ
ಬೆಳಗುವ
ನಾವ್ ಆರತಿ ಜಯಘೋಷವ ಮೊಳಗಿಸಿ
||ಕರ್ನಾಟಕ||
ಕನ್ನಡದ
ಹೆಮ್ಮರಕೆ ನಾವುಗಳೇ ಹೊಸ ಚಿಗುರು
ಕರುನಾಡಿನ
ಆಳದಲಿದೆ ನಮ್ಮಯ ತಾಯ್ ಬೇರು
ಸೊಗಸೂಸುತ
ತಾನರಳಲಿ ಕನ್ನಡದ ನವಕುಸುಮ
ಶಿರಬಾಗುತ
ರಾಜೇಶ್ವರಿ ನಿನಗೆ ನಮಿಪೆವಮ್ಮ
||ಕರ್ನಾಟಕ||
No comments:
Post a Comment