ಎಂಥಾ
ಸಿರಿ ಇತ್ತು ನೀರಿನ ಸೆಲೆ ಇತ್ತು
ಹಸಿರಿನ
ಚೆಲುವರಳಿ ಊರೆಲ್ಲ ನಗುತಿತ್ತು
ಸಿಹಿನೀರ
ಕೆರೆಯೊಂದು ಊರ ಮಗ್ಗುಲಲಿತ್ತು
ಹೋಗಿಬರುವವರಿಗೆ
ತಂಪನೆರೆಯುತಿತ್ತು
ಬಾಯಾರಿ
ಬಳಲಿದ ಜನಜಾನುವಾರಿಗೆ
ತನ್ನೊಡಲ
ಸೀನೀರ ಕರೆದು ಕುಡಿಸುತಿತ್ತು
ಈಗೆಲ್ಲೋ
ಕಾಣದು ಕೆರೆ ಎಂದೋ ಬತ್ತಿಹುದು
ಬಳಲಿ
ಬಂದವರೆಲ್ಲ ಬಾಯಾರಿ ನಿಂದವರೆ
ಸಿಹಿನೀರ
ಕೆರೆಯ ಮನದೊಳಗೆ ನೆನೆದವರೆ
ನೀರಿಲ್ಲದ ಊರಲ್ಲಿ ಕಣ್ಣೀರ ಕರೆದವರೆ
No comments:
Post a Comment