ಇಷ್ಟು
ನಿಷ್ಠುರವೇಕೆ ಕಷ್ಟದೊಳು ಕಡೆಗಣಿಸಿ
ದೃಷ್ಟಿಯನೆತ್ತಲೋ
ನೆಟ್ಟು ನಿಂತಿರುವೆ ದೇವಾಧಿದೇವ?
ಪಟ್ಟು
ಸಡಿಲಿಸು ತಂದೆ ದಿಕ್ಕೆಟ್ಟು ಬಂದಿರುವೆ
ಕೆಟ್ಟು
ಜಗದೊಳು ನಾನು ನಿನ್ನನೇ ನಂಬಿರುವೆ
ಅಟ್ಟು
ಚಿಂತೆಯನೆಲ್ಲ ಬಾಳಿನಾಚೆಯ ತಟಕೆ
ಬಿಟ್ಟು
ಬಾಳೆನು ನಿನ್ನ ನಾಮಾಮೃತವನು
ಮುನಿಯುವುದು
ತರವೇ ಅರಿಯದಾತನ ಮೇಲೆ
ಹನಿಗರುಣೆಯಿಟ್ಟರೂ
ಕರಗುವುವು ದುರಿತಗಳು
ಕನಿಕರದಿ
ಕಾಪಾಡು ಇರಿಸಿ ನಿನ್ನಯ ಕೃಪೆಯ
ನೀನಿರದೆ
ತೃಣವಿದೀ ಬದುಕು ಕರುಣಾಳು ಪ್ರಭುವೇ
No comments:
Post a Comment