ಪಂಥವೇನುಂಟು
ನನ್ನೊಡನೆ ನಿನಗೆ
ಹೇಳಯ್ಯ
ಸಿರಿದೊರೆಯೆ... ನಾನಂತು ಅರಿಯೆ
ಸಿಹಿಯಾದ
ನೊರೆಹಾಲ್ಗಡಲಿನಲಿ ಮೊರೆವ
ಜೋಗುಳವನಾಲಿಸುತ
ನೀ ಒರಗಿ
ಭವಲೋಕದೊಳಗೆನ್ನ
ತೊರೆದು ಕಾಡಿಸುತಿರುವೆ
ಹಿರಿದಾದ
ಅಖಿಲಾಂಡಲೋಕವನು ಪೊರೆದು
ಸಿರಿವರನೆ
ಸಂಭ್ರಮದಿ ನೀ ನಿರುತ
ಇಹಬಂಧನದೊಳೆನ್ನ
ಇರಿಸಿ ನೋಡುತಲಿರುವೆ
ಸಮನೇನು
ನಾನಿನಗೆ ದೇವದೇವರದೇವ?
ಇಂತೇಕೆ
ಪಂಥವಿದು ಶ್ರೀಕಾಂತ ನನ್ನೊಡನೆ?
ಆಂತರ್ಯದೊಳಗೆಲ್ಲ
ನಿನ್ನನೇ ಸ್ಮರಿಸಿರುವೆ
ನಿಂತು
ಕಾಯೋ ಪ್ರಭುವೆ... ವೇದಾಂತ ವಿಭುವೆ...
No comments:
Post a Comment