ಬೆಳಕಿದೇಕೆ
ಬಾಡಿದೆ...?
ಹೊಸಕಿರಣವ
ಸೂಸದೆ
ಮಬ್ಬು
ಮಸುಕು ಬಯಲಿನಲ್ಲಿ
ಹೊಸಹುರುಪನು
ತಾರದೆ
ಕಪ್ಪಡರಿದ
ಜಗದ ಒಡಲ
ಕಾರ್ಗತ್ತಲ
ಸೀಳದೆ
ಶಕ್ತಿಯೆಲ್ಲ
ಉಡುಗಿದಂತೆ
ಸೋತು
ಸೊರಗಿ ಬಿದ್ದಿದೆ
ಕೊಡವಿ
ಎದ್ದು ಹೊಳೆಯದೇನೆ
ಮಂಕು
ಕವಿದು ಕುಳಿತಿದೆ
ಕರಿನೆರಳಲಿ
ಮರೆಯಾದ
ಸತ್ವ
ತೆರೆದು ತೋರದೆ
ಕೋರೈಸುವ
ಕಾಂತಿ ಬೀರಿ
ನಗುತ ಮಿಂಚಿ ಮಿನುಗದೆ
No comments:
Post a Comment