ನೋಡದೋ ದೂರ ದಿಗಂತದಂಚಿನಲಿ
ನೇಸರನುದಯಿಸುತಿಹ
ಬಂಗಾರದುಂಗುರಕೆ
ರಾಗರಶ್ಮಿಯ
ಹೊಳಪ
ಮೈದುಂಬಿ ಮೆರೆದು
ಸಹಸ್ರ
ರತ್ನರಾಗ ರಶ್ಮಿ
ಹೊಮ್ಮಿ
ಚಿಮ್ಮಿ ಹರುಷದಿ
ಮೂಡುತಿರುವ
ಭಾಸ್ಕರನು
ತಾಮಸ
ತಾನಳಿಸೆ ಜಗದಿ
ತಿರೆಯನಾಳ್ವ
ತಿಮಿರ ತೊಡೆಯೆ
ಹೊನ್ನ
ತೇಜ ನಗುತಿಹ
ತಮದ
ಗಾಢ ಹೊನಲನಳಿಸೆ
ತವಕದಲ್ಲಿ
ಬರುತಿಹ
No comments:
Post a Comment