ವಂದನೆ
ದೇವನೆ ಸುಗುಣಸಾಗರ ಗಣಪನೆ
ಶರಣು
ನಿನಗೆ ಜಗನ್ಮಾತೆಯ ಪ್ರೇಮ ಸುತನೆ
ತಾಯ
ತನುವಲಿ ಮೂಡಿ ಬಂದೆ
ತಂದೆಯೊಲವಲಿ
ಮರುಜೀವ ಪಡೆದೆ
ಮಾತಾ
ಪಿತರೇ ಲೋಕ ಎಂದೇ
ಅಗ್ರ
ಪೂಜೆಯು ನಿನಗೆ ತಂದೆ
ಪುಟ್ಟ
ಬಾಲನ ರೂಪ ಧರಿಸಿ
ಆತ್ಮಲಿಂಗವ
ಭುವಿಗೆ ಇರಿಸಿದೆ
ಅಷ್ಟ
ಅಸುರರ ಮೆಟ್ಟಿ ನಿಂತೆ
ವ್ಯಾಸನುಡಿದ
ಭಾರತವ ಬರೆದೆ
ವಿಘ್ನನಾಶಕ
ವಿಜಯ ನೀಡು
ಅಂಧಕಾರವ
ದೂರ ಮಾಡು
ಬುದ್ಧಿದಾಯಕ
ವಿದ್ಯೆ ಕರುಣಿಸು
ವಕ್ರತುಂಡನೆ
ಅನವರತ ಹರಸು
No comments:
Post a Comment