ಯಾಕೆ
ದೂರವಾದೋ ತಂದೆ ಪೊರೆಯದೆನ್ನನು ನೀನು
ಶೋಕಸಾಗರದಲೆನ್ನ
ನೂಕಿ ಮರೆತುಹೋದೆ
ಧನಕನಕಗಳ
ಬಯಸಿ ಬೇಡುವನಿವನೆಂದೇ
ಮನಕಾಮನೆಗಳನೆಲ್ಲ
ಮುಂದಿಡುವನೆಂದೇ
ಜನಕನಂತೆ
ಎನ್ನ ಪೊರೆಯಬೇಕಾದವನೇ
ನೆನಹು
ಬಾರದೇ ನಿನ್ನ ನಂಬಿ ನಿಂತವನದು
ಶಿರವ
ಬಾಗುವೆ ಎನ್ನ ಪಾಪಗಳ ಪರಿಹರಿಸು
ವರವ
ಕರುಣಿಸಿ ಹರಸು ಸರಿದಾರಿಯಲಿ ನಡೆಸು
ತರವಲ್ಲ
ಪಾಮರನ ಕಡೆಗಣಿಸಿ ನಡೆಯುವುದು
ಕರಪಿಡಿದು ನಡೆಸು ವಾಸುದೇವನ ಸುತನೆ
No comments:
Post a Comment