ನಲ್ಲೇ ನಿನ್ನ ಲಲ್ಲೆ ಮಾತು
ಜಲ್ಲೆ ಕಬ್ಬು ಸಿಗಿದಂಗಿತ್ತು
ಒಲ್ಲೆ ಎಂದರು ನೀಡಿದ ಮುತ್ತು
ಕೆನ್ನೆ ಕೆಂಪು ಮಾಡುತ್ತಿತ್ತು
ನೀ ಒಮ್ಮೆ ಎದೆಗೊರಗೆ
ಬರಿಯೊಲವೆ ಸುರಿಯುತಲಿತ್ತು
ನಿನ್ನ ಮಡಿಲಲ್ಲಿ ತಲೆಯಿಡಲು
ಸ್ವರ್ಗದ ತೊಟ್ಟಿಲಲ್ಲಿ ತೇಲಿದಂತಿತ್ತು
ನನ್ನ ಬೊಗಸೆಯೊಳಗರಳಿದ್ದ ನಿನ್ನ
ಮೊಗ
ಮರೆಸುತಿತ್ತು ಈ ಜಗ
ನೀನಿಲ್ಲದೆ ಬರಿದಾದ ಬೊಗಸೆಯ
ನೋಡಿ
ತೊರೆಯಬೇಕೆನಿಸಿದೆ ಜಗವನೀಗ
No comments:
Post a Comment