ಒಳ್ಕಲ್ಲಲ್ಲಿ ಖಾರ ಅರದಂಗ್
ಅರಿತಾ ಐಯ್ತೆ ಬದುಕು
ಕಷ್ಟ ಬಂದಾಗ್ ಹೆಂಗಿರ್ಬೇಕು
ಅನ್ನೋದ್ ತಿಳ್ಕೋಬೇಕು
ಅತ್ಲಾಗ್ ಇತ್ಲಾಗ್ ಎತ್ಲಾಗ್ ಹೋಗ್ಲಿ
ಎದೆ ಮುಂದುಕ್ ಮಾಡ್ಕಂಡ್ ನಾವು
ಎಷ್ಟೇ ಕಷ್ಟ ಬಂದ್ರು ಸರಿಯೇ
ಹೆದರಿ ಕಣ್ಣೀರ್ ಕರಿಲೇಬಾರ್ದು
ದೊಡ್ಡ ದೊಡ್ಡ ಚೂರಿದ್ದಂಗೆ
ನೋವು ಕಷ್ಟ ದುಃಖ
ಅರದ್ಮ್ಯಾಲ್ ನುಣ್ಣಾಗ್ ಅಯ್ತಾವೆಲ್ಲ
ಕಾಣದಿಲ್ಲ ಪಕ್ಕ
ಜೀವ್ನ ಅನ್ನೋ ಒಳ್ಳೀನೊಳ್ಗೆ
ಕಲ್ನಂಗಿರ್ಬೇಕ್ ಶ್ರಮ
ಪಾಪ ಪುಣ್ಯ ಅವ್ನುಗ್ ಬುಟ್ಬುಟ್
ಸಾಗ್ತಾ ಇರ್ಬೇಕ್ ಕರ್ಮ