ಭಾವನೆಗಳ ಬಿಂದಿಗೆಯ ಹಿಡಿದು
ನಿಂತಿರೆ ನಾನು,
ಕುದುರೆಯೇರಿ ಶರವೇಗದಿ ಬಂದ
ಗೆಳೆಯ ನೀನು
ನಿನಗರ್ಪಿಸುವೆ
ಈ ಭಾವನೆಯ ತಿಳಿನೀರ
ಕಲ್ಮಶವಿಲ್ಲ ಇದರೊಳಗೆ,
ಅಮೃತಕ್ಕಿಂತ ಪರಿಶುದ್ಧ
ಸ್ವೀಕರಿಸು ಬಹುದಿನಗಳ ಭಾವನೆಯ
ನಿರಾಕರಿಸದಿರು
ಒಲ್ಲೆಯೆಂದರೆ ಒಡೆವುದೆನ್ನ ಮನ
ತಂದಿರುವೆ ಎನ್ನ ಅಂತರಾಳದಲ್ಲಿ
ಬಾಯ್ತೆರೆದ ಬತ್ತದ ಭಾವನೆಗಳ
ನಿನ್ನೆಡೆಗೆ,
ಹೊಸಕಬೇಡ ಗೆಳೆಯ
ನೀ ಹೊಸಕಿದರೂ
ಬಾಡದ ಭಾವನೆಗಳಿವು
ನೆನಪಿರಲಿ