ಯಾವ
ದೇವನೊಲಿದನೋ ನಿನ್ನ ನಾಲಗೆಯಲಿ
ಗಾನದೇವಿ
ನೆಲೆಸಿದಳೋ ಕೊರಳಿನಲಿ
ಗಾನಗಂಧರ್ವ
ನಿನ್ನನುಪಮ ಗೀತೆಗೆ ಮರುಳಾದೆನೋ
ನಾದಾಮೃತದ
ನಿತ್ಯಕಛೇರಿ ನೀನುಲಿದಿರಲು
ರಾಗಪಾಡುತಿರೆ
ರಸ ಹೊಮ್ಮುವ ಕಡಲು
ಮಧುರಕಂಠದ
ಸ್ವರಸಂಚಾರಕೆ ಬೆರಗಾದೆನೋ
ಕರ್ಣಾನಂದವಿದು
ಸುಶ್ರಾವ್ಯದಾಲಾಪ
ಶುದ್ಧಶೃತಿ
ಲಯತಾಳಗಳ ಲೇಪ
ಭಾವಗಾನದ
ನಾದಲಹರಿಗೆ ಮನಸೋತೆನೋ
No comments:
Post a Comment