ಇಂದು
ಬರುವೆಯಾ ತಂದೆ ಶ್ರೀಹರಿಯೇ ಗೋವಿಂದ
ಎಂದು
ಕಾಯುತಲಿರುವೆ ಮುಖತೋರೋ ಮುಕುಂದ
ಅಂದ
ಕಣ್ತುಂಬಿಕೊಳಲು ಕಾತರಿಸಿರುವೆ
ನಂದಗೋಪಾಲ
ನಿನ್ನ ಲೀಲೆ ಪಾಡಿರುವೆ
ಚಂದದಾಟವನಾಡಿ
ನಗುತ ಎನ್ನೆಡೆಗೆ
ಕಂದನಂದದಿ
ನಲಿದೊಲಿದು ಬಾರಯ್ಯಾ
ಇಂಗದ
ಯಾತನೆ ಎಂದಿಗೆ ಮುಗಿವುದೋ
ಭಂಗದ
ಜೀವನ ಎತ್ತಣ ನಡೆವುದೋ
ರಂಗ
ನಿನ್ನಂದವ ಕಾಣದೆ ಎನಗೆ ಜಗದ
ಸಂಗದೊಳಿನಿತೂ
ಸೊಗಸಿಲ್ಲ ಸುಖವಿಲ್ಲ
No comments:
Post a Comment