ಗಿರಿಯಲಿ
ಹುಟ್ಟಿ ಕಡಲಲಿ ಬೆರೆಯಲು
ನದಿಯದು
ನೋಡು ಓಡುತಿದೆ
ಝರಿಯಲಿ
ಹರಿದು ತೊರೆಯಲಿ ಬೆರೆತು
ಸುಮಧುರ
ಗಾನವ ಗೈಯ್ಯುತಿದೆ
ಬಾಗುತ
ಬಳುಕುತ ಜಿಗಿಯುತ ಸಾಗಿ
ಜಲಪಾತವ
ತಾ ಸೃಜಿಸುತಿದೆ
ಜೀವಸಂಕುಲದ
ದಾಹವ ತೀರಿಸಿ
ಜೀವದ
ಸೆಲೆ ಎಂದೆನಿಸುತಿದೆ
ಬಣಬಣಗುಡುವ
ಒಣಬಯಲಲ್ಲಿ
ಹಸಿರನು
ಉಕ್ಕಿಸಿ ನಗಿಸುತಿದೆ
ಸಾಗುವ
ಹಾದಿಯ ಇಕ್ಕೆಲದಲ್ಲೂ
ಹೊಸ ಇತಿಹಾಸವ ಬರೆಯುತಿದೆ
No comments:
Post a Comment