ಜತನದಲೆಂತು
ಪೊರೆವೆಯೋ ಪೃಥುವಿಯ ಅನುಕ್ಷಣವು
ಪಿತನಂತೆ
ನನ್ನಾಣೆ ನಾ ಕಾಣೆ ರುಕ್ಮಿಣೀರಮಣ
ಜಗಪೊರೆವ
ಧರೆಯು ಕುಪಿದು ಕಂಪಿಸಿರೆ
ಸಾಗರನಬ್ಬರದಿ
ಹೆಬ್ಬಲೆಯನೆ ಸೃಜಿಸಿರೆ
ವೇಗತಳೆದ
ಮಾರುತ ಚಂಡನಾಗಿ ಸುಳಿದಿರೆ
ಸೊಗವನೀವ
ವರುಣ ಅತಿವೃಷ್ಟಿಯನೆ ತರುತಿರೆ
ಕ್ಷಣಕ್ಷಣವೂ
ಪ್ರಳಯಕಾಲದಂತೆ
ರಣರಂಗದೊಲು
ಭುವಿವು ತೋರಿರಲು
ತೃಣಕಾಷ್ಟಕೆಲ್ಲ
ತೃಷೆಯ ತೀರಿಸುತೆ
ಚಣದೊಳೆಲ್ಲವ ಪರಿಹರಿಸಿ ಪೊರೆವೆ
No comments:
Post a Comment