ಧರ್ಮದ
ದೇವರು ಎಲ್ಲೆಡೆಯೂ ನೆಲೆಸಿದ್ದಾನೆ
ಮಂದಿರ
ಮಸೀದಿ ಚರ್ಚು ದರ್ಗಾ
ಮಠ
ಬಸದಿ ಗುರುದ್ವಾರ ಎಲ್ಲೆಲ್ಲೂ
ಕಲಿಗಾಲದ
ನೆಲದಲ್ಲಿ ಅಳಿವಿಲ್ಲದಂತೆ
ಅವನನ್ನು
ಮಾನವ ಯೋಜಿತ ಮತಗಳ
ಸಂಕೋಲೆಗಳು
ಬಂಧಿಸುವುದಿಲ್ಲ
ಎಲ್ಲಿ
ಬೇಕಿದ್ದರೂ ನಿರ್ಭಯವಾಗಿ ಸಾಗಬಲ್ಲ
ಧರ್ಮದ
ದಂಡವನ್ನು ಕೈಯ್ಯಲ್ಲಿ ಹಿಡಿದು
ಇಂದು
ಮಹಲುಗಳ ಸರ್ವಾಲಂಕಾರಿತ
ದೇವರಕೋಣೆಯಲ್ಲಾದರೆ...
ನಾಳೆ,
ಕೊಳಕು
ಜೋಪಡಿಯಲ್ಲಿ, ಪಾಳುಗುಡಿಗಳಲ್ಲಿ
ನೆಲೆಸುವನು
ಎಂದಿನಂತೆಯೇ ಮಂದಸ್ಮಿತನಾಗಿ
ಇಲ್ಲಿ
ಗೆಡ್ಡೆಗೆಣಸುಗಳನ್ನು ತಿಂದು ಸಂತುಷ್ಟನಾಗಿ
ಅಲ್ಲಿ
ಪಾಯಸಪಾನಕಗಳ ಹೀರುವನು ಭೇದವಿಲ್ಲದೇ
ಏನು
ಕೊಟ್ಟರು, ಯಾರು ಕೊಟ್ಟರೆಂಬ ವಿಚಾರಕ್ಕಿಂತ
ಹೇಗೆ
ತಂದರೆಂಬುದಷ್ಟೇ ಮುಖ್ಯ: ಧರ್ಮದ ದೇವರಿಗೆ
ಭಕ್ತಿಯಿಂದ
ಮಸೀದಿಯಲ್ಲಿ ಮೇಣದಬತ್ತಿ ಹಚ್ಚಿದರೂ
ಚರ್ಚಿನಲ್ಲಿ
ದೀರ್ಘದಂಡ ಹಾಕಿದರೂ
ಮಂದಿರದಲ್ಲಿ
ಪ್ರಾರ್ಥಿಸಿದರೂ ಒಲಿಯುತ್ತಾನೆ
ಎಲ್ಲಿದ್ದರೂ
ಪಾಪ-ಪುಣ್ಯ ದಯೆ-ಧರ್ಮ ಸತ್ಯ-ಸುಳ್ಳಿನ
ನಿರಂತರ
ತುಲನೆ ಮಾಡುತ್ತಲೇ ಇರುತ್ತಾನೆ
ಒಂದೊಂದು
ಮತಕ್ಕೂ ಒಂದೊಂದು ವೇಷವಿಲ್ಲ
ನಾವು
ತೊಡಿಸಿದ ವಸ್ತ್ರ ಬೇಡವೆನ್ನುವುದಿಲ್ಲ
ಧರ್ಮದ ದೇವರಿಗೆ ಹಲವಾರು ಮುಖಗಳಿಲ್ಲ