ನಿನ್ನ ಸ್ನೇಹದೊಳೊಲವ
ನಾ ಬಲ್ಲೆ ಗೆಳತಿ
ನಯನದ ಮಡುವಲ್ಲಿ
ಅಡಗಿಹುದು ಪ್ರೀತಿ
ಸೂಜಿಗಲ್ಲಿನೋರೆನೋಟ
ಕೆಣಕುತಿಹುದು ನನ್ನ ಮನವ
ತುಟಿಯಂಚಿನ ಕಿರುನಗೆಯು ಹೇಳುತಿದೆ ಎಲ್ಲ
ನೀನಿದ್ದರೂ ಮೌನವಾಗಿ
ನೀ ಅಂದು ನಾಚಿ ನುಡಿದ ಮುತ್ತು
ಬಾಚಿ ತಬ್ಬಿತು ನನ್ನ
ನಿನ್ನ ಈ ಸವಿನುಡಿಯ
ಕೇಳಲೆಂತು ಚೆನ್ನ
ಸೂಸಿಹುದು ಎಲ್ಲವನು
ನಿನ್ನ ಹೊಳೆವ ಕಣ್ಣು
ನಿನ್ನ ಹೊಗಳ ಹೊರಟರೆ
ಬಾಯಿ ಬಾರದಿನ್ನು
ಬಾರೆ ಗೆಳತಿ ಹೃದಯದೊಡತಿ
ಜೊತೆಗೆ ನಕ್ಕು ನಲಿಯುವ
ಬಾಳ ಕ್ಷಣವನೆಲ್ಲ ನಾವು
ಒಟ್ಟಿಗೇನೆ ಕಳೆಯುವ
No comments:
Post a Comment