ನಲಿವ ದೇಹ
ಹೊಳೆವ ನೇಹ
ಅವಳ ಮೇಲೆ ನನ್ನ ಮೋಹ
ಅವಳೆ ಒಲವು, ಅವಳೆ ಚೆಲುವು
ಅವಳೆ ಬಾಳ ಗೆಲುವು
ಅವಳು ಜೊತೆಗೆ ಇರಲು ಹೀಗೆ
ಮರೆವೆ ನನ್ನ ಎಲ್ಲ ನೋವು
ಎದೆಯನೇರಿ ಆಡುತಿಹಳು
ನೋವೆ ಇಲ್ಲ ನನಗೆ
ಅವಳ ಬಿಟ್ಟು ಇರೆನು ನಾನು
ಒಂದೇ ಒಂದು ಘಳಿಗೆ
ಪುಟ್ಟ ಪಾದ ಹೋಲುತಿತ್ತು
ಬಂಗಾರದ ಮೀನು
ಬಂಗಾರದ ಮೀನು
ತೂಗಿ ತೂಗಿ ಮಿನುಗುತಿತ್ತು
ಕಿವಿಯಲಿದ್ದ ಹೊನ್ನು
ಪುಟ್ಟ ಕಂದ ಅಂದು ಅವಳು
ಕೈಯ ಹಿಡಿದು ನಡೆಸಿದೆ
ಎಡವಿ ಬಿದ್ದ ಅವಳ
ನೋವ ನಾನು ಕೂಡ ನುಂಗಿದೆ
ಆಡಲೆಂದು ಹೊರಗೆ ಇರಲಿ
ಓದಲೆಂದು ಒಳಗೆ ಇರಲಿ
ನನ್ನ ಕಾವಲಿದ್ದೆ ಇದೆ
ಎಲ್ಲಿ ಹೋದರವಳು ಅಲ್ಲಿ
ಹರಸುವೆನು ನಿತ್ಯ ನಾನು
ಅವಳ ಬಾಳು ಬೆಳಗಲಿ
ನನ್ನ ಮುದ್ದು ಮಗಳಿಗೆಂದು
ಬೇರೆ ಏನು ತಾನೆ ನೀಡಲಿ
No comments:
Post a Comment