ಕಾಸಿಗಲ್ಲ ಕವಿತೆ

ಮೂರು ಕಾಸು ಸಿಗುವುದಿಲ್ಲ
ಏಕೆ ಬರೆವೆ ಕವಿತೆ?
ಎಂದು ಕೆಳುವವರಿಗಾಗೆ
ನನ್ನ ಈ ಕವಿತೆ

ಕೇಳಿರೆಲ್ಲ ಗೆಳೆಯರೇ
ತಿಳಿಯಿರೆಲ್ಲ ಗೆಳತಿಯರೆ
ಕಾಸಿಗಾಗಿ ಬರೆಯಲಿಲ್ಲ
ನಾನು ಎಲ್ಲ ಕವಿತೆ
ಇದುವೇ ಮನದ ಒಡಲಿನಿಂದ
ಮೂಡಿ ಬಂದ ಒರತೆ

ಮನಸು ತುಂಬಿ ಬಂದಾಗ
ನೋವ ನುಂಗಿ ನಕ್ಕಾಗ
ಹೃದಯ ತುಂಬಿ ಅತ್ತಾಗ
ಎದೆಯಲೇನೋ ಹೊಸದು ರಾಗ
ಮೂಡುವುವು ಕವನ ಕವಿತೆ
ಇವುಗಳೆಲ್ಲ ಮನದ ಚರಿತೆ

3 comments:

  1. Good one kano..every thing as its own value,only if value is valued....

    ReplyDelete
  2. ನಂದೀಶ್: ಏಕೆ ನಿಲ್ಲಿಸಿ ಬಿಟ್ಟಿದ್ದೀರಿ ಕವನಗಳ ಕೃಷಿ? ಚೆನ್ನಾಗಿ ಬರೆದಿದ್ದೀರಿ. ಮುಂದುವರೆಸಿ. ಶುಭವಾಗಲಿ.

    ReplyDelete
    Replies
    1. ಧನ್ಯವಾದಗಳು ನಿಮ್ಮ ಅಭಿಮಾನಕ್ಕೆ, ಮತ್ತೆ ಮುಂದುವರೆಸಿದ್ದೇನೆ ಓದಿ ಹಾರೈಸಿ...

      Delete