ಮನವು ಬರೆದ ಒಲವನೆಲ್ಲ
ಅಳಿಸುತಿದೆ ಕಣ್ಣ ನೀರು
ಅಳಿದು ಇಳಿಯುತಿರುವ ಮಸಿಯು
ತಾಳುತಿದೆ ಅವಳ ರೂಪ
ಹೊಳೆವ ಕಣ್ಣು ಕಾಂತಿ ಬೀರಿ
ನಗುತಲಿದೆ ನನ್ನ ಅಳಿಸಿ
ನೆನೆದು ಇನಿಯಳೊಮ್ಮೆ ಮನದಿ
ತಾಳಲಾರೆ ಬೇಗುದಿ
ಚೆಲುವ ನಿನ್ನ ಕಿರು ನಗೆ
ಸೋಕಿ ನನ್ನ ನೋವಿಗೆ
ಇರಿಯುತ್ತಿದೆ ನನ್ನೆದೆ
ಎಲ್ಲಿ ಹೋದೆ ನಿಲ್ಲದೆ
ನೀನೆ ಜೀವ ನಾನೇ ದೇಹ
ಎಂದು ಅಂದು ಹೇಳಿದೆ
ಉಸಿರೆ ಹೋಗುತಿಹುದು ಇಂದು
ಮರುಗದೇನೆ ನಿನ್ನೆದೆ
No comments:
Post a Comment