ಕಟುನುಡಿಗಳೆನ್ನ
ತಿವಿದಿಹವು ಇಂದೇಕೋ
ಸೂಜಿಯಲಿ
ಜೀವ ಇರಿದಂತೆ
ಅಣಕಿಸುತ
ಒತ್ತುತಿದೆ ಮಾತು ಎದೆಯೊಳಗೆ
ಮುಳ್ಳಿನ
ಮೊನೆ ಮುರಿದಂತೆ
ಅರ್ಥವಾಗದಿದೆ
ಅಸ್ಪಷ್ಟ ಮಾತು
ಎಣ್ಣೆತೋಯ್ದ
ಕಣ್ಣು ತೆರೆದಂತೆ
ಕೇಳದಾಗಿದೆ
ಸಿಡುಕಿದ ಪಿಸುಮಾತು
ಗಾಳಿಯಲಿ
ದೀಪ ಉರಿದಂತೆ
ನಕ್ಕುನುಡಿವೆಯ
ಕೊಂಚ
ನಿನ್ನೆದೆಯ
ಮಾತು ತಿಳಿವಂತೆ
ಸವಿನುಡಿಗಳಿರದ
ಬದುಕು
ನೀರಿನೊಳು
ಬಂಡಿ ಎಳೆದಂತೆ
No comments:
Post a Comment