ಬನ್ನಿ
ಮಸಣದ ಮಾರಿಯರೇ ಹುರಿದುಮುಕ್ಕಿಬಿಡಿ
ರುಧಿರ
ಶರಧಿಯುಕ್ಕುಕ್ಕಿ ಹೆದ್ದೆರೆಗಳೇಳುತಿವೆ
ಕತ್ತಲರಾಜ್ಯದಿಂದ
ಕೆನ್ನಾಲಗೆಯ ಚಾಚಿ ಕೇಕೆಹಾಕುತ ಬನ್ನಿ
ರಣರಂಗದಲಿ
ಕದನೋತ್ಸಾಹ ಕಳೆದು ನಿಂತಿರುವೆ
ಕ್ಷಾತ್ರ
ತೇಜದ ಖಡ್ಗ ಝಳಪಿಸದೇ ಕಳೆಗುಂದಿದೆ
ಇದಕಿಂತ
ಸಮಯವಿಲ್ಲ ಮಾರಣಹೋಮಕ್ಕೆ ಹಾರಿ ಬನ್ನಿ
ಘೋರಾಂಧಕಾರದಿರುಳಿನಲಿ ಬೆಳಕಿನುಂಡೆಗಳು ಬೇರೂರುವ ಮುನ್ನ
ಬೆಂಕಿಯ
ಬೆತ್ತಲೆ ಮೈಯನಪ್ಪಿ ದೇಹ ದಹಿಸುವ ಮುನ್ನ
ಬನ್ನಿ
ರಕ್ಕಸಪೂತನಿಯರೇ ವಿಷವುಣಿಸಿ ಸಾವಿನಮನೆಗೆ ದೂಡಬನ್ನಿ
No comments:
Post a Comment