ನಿನ್ನ
ಹೆಸರನೆ ಬರೆಯುತಿದೆ
ಶಾಯಿ
ಇರದ ಲೇಖನಿ
ಬರೆದ
ಕಾಗದ ತೋಯಿಸುತಿದೆ
ಸುರಿದ
ಕಣ್ಣ ಕಂಬನಿ
ಕಾಣದಂತ
ಅಕ್ಷರದಲಿ
ನೂರು
ಭಾವ ಅಡಗಿದೆ
ನಿನ್ನ
ನೆನಪ ದೋಣಿಯಲ್ಲೆ
ನನ್ನ
ಜೀವ ತೇಲಿದೆ
ಒಲವ
ಗೀತೆ ಮೂಡದೇನೆ
ಹೀಗೆ
ಮುರುಟಿ ಹೋಗಿದೆ
ಪ್ರೇಮಪತ್ರ
ಅರಳದೇನೆ
ಅಳುತ ಮುದುಡಿ ಸೊರಗಿದೆ