ಭಿನ್ನವಾದ ನಿನ್ನ ರೂಪ
ಮೂಡಿ ನನ್ನ ಮನದಲಿ
ಕಾಡುತಿಹುದು ನನ್ನನೀಗ
ನಟ್ಟ ನಡುವೆ ಹಗಲಲಿ
ಮೂಡಿ ನನ್ನ ಮನದಲಿ
ಕಾಡುತಿಹುದು ನನ್ನನೀಗ
ನಟ್ಟ ನಡುವೆ ಹಗಲಲಿ
ಊರ ಜಾತ್ರೆ ಮಧ್ಯದಿ
ನಿನ್ನ ನೋಡ ಬಂದರೆ
ಹೂವ ಬುಟ್ಟಿ ಅಡ್ಡ ಹಿಡಿದು
ಬೆರಳ ಮುಂದು ಮಾಡಿದೆ
ಮೊನ್ನೆ ನಸುಕು ಮಬ್ಬಿನಲಿ
ಮೊಗವ ಮರೆಸಿ ಓಡಿದೆ
ದೀಪದೊಂದು ಹಬ್ಬದಲಿ
ಜಡೆಯ ಮಾತ್ರ ತೋರಿದೆ
ಬಾರೆ ನೀರೆ ಮೊಗವ ತೋರೆ
ನೋಡಿ ಸವಿವೆ ಚೆಲುವನು
ಕಣ್ಣ ತುಂಬ ಕಾಣುವಾಸೆ
ನಿನ್ನ ಪೂರ್ಣರೂಪನು
No comments:
Post a Comment