ಬೇಡವೆಂದರೂ ಏಕೆ ಬರುವೆ ನೆನಪೇ
ಮನದಂಗಳಕೆ ಮತ್ತೆ ಮತ್ತೆ
ತೆರಳು ದೂರಕೆ ಇನ್ನೂ ದೂರಕೆ
ಮರಳದಿರು ನನ್ನೀ ಲೋಕಕೆ
ಮನದಂಗಳಕೆ ಮತ್ತೆ ಮತ್ತೆ
ತೆರಳು ದೂರಕೆ ಇನ್ನೂ ದೂರಕೆ
ಮರಳದಿರು ನನ್ನೀ ಲೋಕಕೆ
ಪವಡಿಸಿದೊಡನೆ ಹರಡುವೆ
ಕೆಸರ ಮೇಲಿನ ಕಳೆಯಂತೆ
ಏಕಾಂತದೊಳು ಕ್ಷಣದೆ ಹಬ್ಬುವೆ
ಉಸಿರುಗಟ್ಟಿಸುವ ಬಳ್ಳಿಯಂತೆ
ಕೆಸರ ಮೇಲಿನ ಕಳೆಯಂತೆ
ಏಕಾಂತದೊಳು ಕ್ಷಣದೆ ಹಬ್ಬುವೆ
ಉಸಿರುಗಟ್ಟಿಸುವ ಬಳ್ಳಿಯಂತೆ
ನೋಡುವ ಪ್ರತಿ ನೋಟದೊಳು ಪ್ರಜ್ವಲಿಸುವೆ
ಇಬ್ಬನಿಯೊಳಗಿನ ಕೋಟಿ ಕಿರಣಗಳಂತೆಬೆಳ್ಳಿಚುಕ್ಕಿಗೆ ದೃಷ್ಟಿ ನೆಟ್ಟಿರುವಾಗ
ಹೊಳೆಯುವೆ ಪುಟ್ಟ ಹಣತೆಯಂತೆ
ಮುದದಿಂದಲಿ ನಲಿಯುವಾಗ ಬೆರೆಯುವೆ
ರುದ್ರ ವೀಣೆಯ ಸ್ವರದಂತೆ
ಮತ್ತಿನಲಿ ಮೈಮರೆತಿರುವಾಗ ಎಚ್ಚರಿಸುವೆ
ಚಾಟಿಯಿಂದಲಿ ಬೀಸಿದಂತೆ
ರುದ್ರ ವೀಣೆಯ ಸ್ವರದಂತೆ
ಮತ್ತಿನಲಿ ಮೈಮರೆತಿರುವಾಗ ಎಚ್ಚರಿಸುವೆ
ಚಾಟಿಯಿಂದಲಿ ಬೀಸಿದಂತೆ
No comments:
Post a Comment