ಭಾವದೊರತೆ
ಬರುವನೇನೋ ವಸಂತ
ಬರುವನೇನೋ ವಸಂತ
ಚಿಗುರ ಕುಡಿಯನು ನಗಿಸುತ
ಚಿಲಿಪಿಲಿ ಗಾನವ ಉಲಿಸುತ
ಚೈತ್ರಮಾಸದ ರಮ್ಯತೆಗೆ
ಹೊಸ ವರ್ಣವನೀಯುತ
ಭೂರಮೆಯ ತವರಿಗೆ
ಹಸಿರ ತೋರಣ ಕಟ್ಟುತ
ಮರಗಿಡಗಳ ತುರುಬಿಗೆ
ನಗೆಹೂವನು ಮುಡಿಸುತ
ಯುಗದ ಆದಿಯ ಹಾದಿಯಲಿ
ಹೊಸ ಹುರುಪನು ತುಂಬುತ
Newer Posts
Older Posts
Home
Subscribe to:
Posts (Atom)