ಚೆಲುವ ಗರಿ

ನವಿಲ ಹಿಂಡು ಕುಣಿದ ಬಳಿಕ
ಕಳಚಿ ಬಿದ್ದ ಚೆಲುವ ಗರಿಗೆ
ಸೇರುವಾಸೆ 
ತಾನು ಬೇಗ
ಚಿತ್ತ ಚೋರ ಹರಿಯ ಮುಡಿಗೆ

ಮುರಳಿ ನಾದದಿಂಪು ಕೇಳಿ
ಉಲಿದು ರಾಧೆ ಬರುವಳಿಲ್ಲಿ
ಒಲಿದು ಬರುವ ಪ್ರಿಯನಿಗಾಗಿ  
ಹೆಕ್ಕಿ ಕೊಳುವಳೆನ್ನ ನಗುವ ಚೆಲ್ಲಿ
ಒರಗಿ ಕುಳಿತು ಅವನ ಎದೆಗೆ
ಕೊರಳ ಬೆರೆಸಿ ಕೊಳಲ ದನಿಗೆ
ನೀಡಿ ತನ್ನ ಭಾವ ಬೆಸುಗೆ
ಮುದವ ತರುವಳೆನ್ನ ಹರಿಗೆ
ಇರಿಸಿ ಗರಿಯ
ಕೊಳಲಿಗೊಂದು ಮುಡಿಗೆ ಒಂದು
ನಲಿವಳವ
ಳು
ಮುದ್ದು ಮೊಗದ ಸೊಗಸ ಕಂಡು

ತೆರಳಿ ಇಂದು ಸನಿಹ ಅಗಲಿ
ಮತ್ತೆ ಬಂದೆ ಬರುವಳಿಲ್ಲಿ
ಹೊಸತು ಗರಿಯ ಅರಸುತ
ಚೆಲುವ ಗರಿಯ ನೆನೆಯು