ಅವಳೆ ನಾನೋ.....
ನಾನೇ ಅವಳೊ.... ತಿಳಿಯದಂಥ ಘಳಿಗೆ
ಯಾರೊ ಬಂದು ಕುಳಿತ ಹಾಗೆ ನನ್ನ ಹೃದಯದೊಳಗೆ
ಸಾಗರದೊಳೇಳುವ ಅಲೆಯೆಲ್ಲವೂ ದಡವ ತೋಯುವ ಹಾಗೆ
ಮನದೊಳೆದ್ದ ಬಯಕೆಯೆಲ್ಲ ಹಾಡಾಗಿದೆ ಹೀಗೆ
ಮೌನದಾಚೆಗೂ ಮಾತು ತೇಲಿ
ಹೊಡೆಯುತ್ತಿದೆ ಮನವು ಜೋಲಿ.....
ನಾನೇ ಅವಳೊ.... ತಿಳಿಯದಂಥ ಘಳಿಗೆ
ಯಾರೊ ಬಂದು ಕುಳಿತ ಹಾಗೆ ನನ್ನ ಹೃದಯದೊಳಗೆ
ಸಾಗರದೊಳೇಳುವ ಅಲೆಯೆಲ್ಲವೂ ದಡವ ತೋಯುವ ಹಾಗೆ
ಮನದೊಳೆದ್ದ ಬಯಕೆಯೆಲ್ಲ ಹಾಡಾಗಿದೆ ಹೀಗೆ
ಮೌನದಾಚೆಗೂ ಮಾತು ತೇಲಿ
ಹೊಡೆಯುತ್ತಿದೆ ಮನವು ಜೋಲಿ.....
ಹಾಡದೆ ಉಳಿದ
ನನ್ನೆದೆಯ ಭಾವಗೀತೆಗೆ ಸ್ವರವಾಗಿಹಳು
ಬಿಡಿಸದೆ ಉಳಿದ
ಬಿಡಿಸದೆ ಉಳಿದ
ಕನಸಿನ ಚಿತ್ರಕೆ ಬಣ್ಣವಾಗಿಹಳು
ಮನಸೆಂಬ ನಲಿವಿನ ಬತ್ತಳಿಕೆಯಲ್ಲಿ ಬಾಣವಾಗಿಹಳು
ಜೀವಕಳೆ ನಂದಿಹ ಈ ಮನಕೆ ತಂಪನೆರೆದಿಹಳು
ಮನಸೆಂಬ ನಲಿವಿನ ಬತ್ತಳಿಕೆಯಲ್ಲಿ ಬಾಣವಾಗಿಹಳು
ಜೀವಕಳೆ ನಂದಿಹ ಈ ಮನಕೆ ತಂಪನೆರೆದಿಹಳು